ಆನೇಕಲ್
ಆನೇಕಲ್ : ಇದು ಬೆಂಗಳೂರು ನಗರ ಜಿಲ್ಲೆಯ ತಾಲೂಕುಗಳಲ್ಲೊಂದು. ಆನೇಕಲ್ ಒಂದು ಪ್ರಮುಖ ಪಟ್ಟಣ ಹಾಗು ತಾಲ್ಲೂಕು ಕೇಂದ್ರ. ಬೆಂಗಳೂರಿನಿಂದ ೩೫ ಕಿ.ಮೀ. ದೂರದಲ್ಲಿರುವ ಆನೇಕಲ್, ತಮಿಳುನಾಡು ಗಡಿಯಿಂದ ಕೇವಲ ೫ ಕಿ.ಮೀ.ದೂರದಲ್ಲಿದೆ. ರೇಷ್ಮೆ ವಸ್ತ್ರ ತಯಾರಿಕೆ ಹೆಸರುವಾಸಿಯಾಗಿರುವ ಆನೇಕಲ್ ತಾಲ್ಲೂಕಿನಲ್ಲಿ ಅನೇಕ ಐತಿಹಾಸಿಕ ಹಾಗು ನೈಸರ್ಗಿಕ ತಾಣಗಳಿವೆ.
ಗಡಿನಾಡು ಪ್ರದೇಶದಲ್ಲಿದರು ತಾಲ್ಲುಕಿನಲ್ಲಿ ಕನ್ನಡಿಗರು ಬಹುಸಂಖ್ಯಾತರಗಿದ್ದಾರೆ. ಆನೇಕಲ್ಲನ್ನು ಕರ್ನಾಟಕದ ರಾಗಿಯ ಕಣಜ ವೆಂದು ಕರೆಯಲಾಗುತ್ತದೆ.
ಆನೇಕಲ್ ತಾಲ್ಲೂಕಿನ ಪ್ರಮುಖ ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳು
ಬನ್ನೇರುಘಟ್ಟ
ಬೆಂಗಳೂರಿನಿಂದ ದಕ್ಷಿಣಕ್ಕೆ ಸುಮಾರು 22 ಕಿಮೀ. 25,000 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಹಸುರು ಆಚ್ಛಾದಿತ ಪ್ರಾಣಿ ಸಂಗ್ರಹಾಲಯ. ಚಿಟ್ಟೆಗಳ ಪಾರ್ಕ್ ಇತ್ತೀಚಿನ ಆಕರ್ಷಣೆ. ದಟ್ಟ ಕಾಡು, ವನ್ಯಜೀವಿಗಳ ವಿಹಾರಧಾಮ. ಕಾಡುಕೋಣ, ಚಿರತೆ, ಮುಳ್ಳುಹಂದಿ ಮುಂತಾದ ಪ್ರಾಣಿಗಳಿಗೆ ಆಶ್ರಯಧಾಮ. ಪೂರ್ವ ಮತ್ತು ಪಶ್ಚಿಮ ಘಟ್ಟದ ನಡುವೆ ಓಡಾಡುವ ಆನೆಗಳ ಕಾರಿಡಾರ್.
ಮಾರ್ಗದರ್ಶನ...» ಬನ್ನೇರುಘಟ್ಟ ಬೆಂಗಳೂರು ಹಾಗು ಆನೇಕಲ್ ನಡುವೆ ಎರಡೂ ಸ್ಥಳಗಳಿಂದ ಸುಮಾರು ೨೦ ಕಿ.ಮೀ ದೂರದಲ್ಲಿದೆ. ಬನ್ನೇರುಘಟ್ಟದಲ್ಲಿ ಒಂದು ಸುಂದರ ರಾಷ್ಟೀಯ ಉದ್ಯಾನವವಿದೆ.
ಮಾಹಿತಿ ತಂತ್ರಜ್ನಾನ ಹಾಗು ವಿದ್ಯುನ್ಮಾನ ಸಂಸ್ಥೆಗಳ ಕಚೇರಿಗಳಿರುವ ವಿದ್ಯುನ್ಮಾನ ನಗರ (Electronics City) ಆನೇಕಲ್ ನಿಂದ ೨೦ ಕಿ.ಮೀ ದೂರದಲ್ಲಿದೆ.
ಆನೇಕಲ್ ನಿಂದ ೫ ಕಿ.ಮೀ ದೂರದಲ್ಲಿರುವ ಮುತ್ಯಾಲಮಡುವಿನಲ್ಲಿ ಸುಂದರ ಜಲಪಾತವಿದೆ ಹಾಗು ಇದು ಒಂದು ಪ್ರಸಿದ್ದ ಪ್ರವಾಸಿ ತಾಣವಾಗಿದೆ.
ಆನೇಕಲ್ ಪಟ್ಟಣದ ಪ್ರಮುಖ ಪ್ರೇಕ್ಷಣೀಯ ಸ್ಧಳಗಳು

ಇತಿಹಾಸ ಪ್ರಸಿದ್ಧ ಕಂಬದ ಗಣಪತಿ
ಶ್ರೀ ತಿಮ್ಮರಾಯಸ್ವಾಮಿ ದೇವಾಲಯ
ಶ್ರೀ ಚನ್ನಕೇಶವ ದೇವಾಲಯ
ಶಂಕರ ಮಠ : ಇಲ್ಲಿನ ಅಮೃತ ಶಿಲೆಯ ಶ್ರೀ ಶಂಕರಾಚಾರ್ಯ ಹಾಗು ಶ್ರೀ ಶಾರದಾ ದೇವಿಯ ವಿಗ್ರಹಗಳು