ಆನೇಕಲ್ ನಾಗರೀಕ ವೇದಿಕೆ ಅಂತರ್ಜಾಲ ತಾಣಕ್ಕೆ ಸರ್ವರಿಗೂ ಸುಸ್ವಾಗತ

ANV


I made this widget at MyFlashFetish.com.

Friday, July 8, 2011

ಪಂಚತಂತ್ರ ಆಗಿದೆ ಅತಂತ್ರ, ಫ್ರಾನ್ಸಿಸ್ ಆಸ್ತಿ, ಲೆಕ್ಕ ನಾಸ್ತಿ


Panchatantra Website Errors Karnataka
 ಗ್ರಾಮ ಪಂಚಾಯ್ತಿಯ ವ್ಯವಹಾರಗಳು ಹಾಗೂ ಭೂ ದಾಖಲೆಗಳ ನಿರ್ವಹಣೆ ಸುಸೂತ್ರವಾಗಿ ಆಗಲಿ ಎಂದು ಕರ್ನಾಟಕ ಸರ್ಕಾರ ಪಂಚತಂತ್ರ ಎಂಬ ಹೊಸ ಸಾಫ್ಟ್ ವೇರ್ ಅನ್ನು ಪರಿಚಯಿಸಿದೆ.

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು, ಗ್ರಾಮಮಟ್ಟದಲ್ಲಿ ಆಸ್ತಿ ವಿವರ, ಇತರೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಪಂಚಾಯತ್ ರಾಜ್ ಇಲಾಖೆ ಹಾಗೂ ರಾಷ್ಟ್ರೀಯ ಮಾಹಿತಿ ಕೇಂದ್ರ(NIC) ಇವರು ಜಂಟಿಯಾಗಿ ಅಭಿವೃದ್ದಿ ಪಡಿಸಿರುವ ಈ ಸಾಫ್ಟ್ವೇರ್ http://stg1.kar.nic.in/panchatantra ಎಂಬ URL ನಲ್ಲಿ ಲಭ್ಯವಿದೆ. ಆದರೆ, ಈ ಪಂಚತಂತ್ರದಲ್ಲಿ ಎಲ್ಲವೂ ಅತಂತ್ರವಾಗಿದೆ. ಕನ್ನಡ ಪದಗಳ ವಾಕ್ಯ ಪದ ದೋಷ ಸಹಿಸಿಕೊಂಡರೂ, ಮಾಹಿತಿಯಲ್ಲಿ ಭಾರಿ ಲೋಪ ಕಂಡು ಬಂದಿದೆ.

ಆನ್ ಲೈನ್ ಮುಖಾಂತರ ಕಂದಾಯ ಪಾವತಿಸುವ ಸೌಲಭ್ಯವು ಕೂಡ ಈ ವೆಬ್ ಸೈಟ್ ನಲ್ಲಿ ದೊರೆಯಲಿದೆ. ಸದ್ಯ ಗ್ರಾ.ಪಂ.ಗಳಿಗೆ ಚುನಾವಣೆ ನಡೆದು ನೂತನ ಸಮಿತಿ ಆಸ್ತಿತ್ವಕ್ಕೆ ಬಂದಿರುವುದು ಮಾತ್ರವಲ್ಲದೇ, ಗ್ರಾ.ಪಂ.ಗಳಿಗೆ ನೂತನವಾಗಿ ಪಂಚಾಯಿತಿ ಅಭಿವೃದ್ಡಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಈ ಸಂದರ್ಭದಲ್ಲಿ ಪಂಚತಂತ್ರ ಆನ್ ಲೈನ್ ತಂತ್ರಾಂಶದಿಂದ ಗ್ರಾ.ಪಂ.ಗಳ ಶೇ.100ಕ್ಕೆ 100ರಷ್ಟು ಪಾರದರ್ಶಕ ಆಡಳಿತವನ್ನು ತಳಮಟ್ಟದಲ್ಲಿ ನೀಡುತ್ತದೆ ಎಂಬುದು ಸರ್ಕಾರದ ಉದ್ದೇಶವಾಗಿದೆ.

ಪಂಚತಂತ್ರ ಆನ್ ಲೈನ್ ತಂತ್ರಾಂಶದಿಂದ ಗ್ರಾ.ಪಂ.ಗಳ ಸಂಪೂರ್ಣ ಮಾಹಿತಿ ದೊರೆಯಲಿದೆ. ಇದಕ್ಕಾಗಿ ನೀವು http://stg2.kar.nic.in/gpportal/ ತಾಣವನ್ನು ಸಂಪರ್ಕಿಸಬಹುದು. ಸಮಸ್ಯೆಯತ್ತ ಗಮನ ಹರಿಸೋಣ:

* http://stg2.kar.nic.in/gpportal/ ಬ್ರೌಸ್ ಮಾಡಿ
* english ಅಥವಾ ಕನ್ನಡ ಅಯ್ಕೆ ಮಾಡಿಕೊಳ್ಳಿ
* ಕರ್ನಾಟಕ ನಕಾಶೆಯಲ್ಲಿರುವ ಜಿಲ್ಲೆಯ ಹೆಸರಿನ ಮೇಲೆ ಕ್ಲಿಕ್ ಮಾಡಿ, ತಾಲ್ಲೂಕು ವೀಕ್ಷಿಸಿ
* BANGALORE URBAN>>ಆನೇಕಲ್>>ವಣಕನಹಳ್ಳಿ(ಬಲಬದಿ ಸ್ಕ್ರೋಲ್)>>ಆಸ್ತಿ ತೆರಿಗೆಗಳು>>ಸಿಂಗಸಂದ್ರ(drop down menu) ಗೆ ಹೋಗಿ
* ಆಸ್ತಿ ಸಂಖ್ಯೆ CHR11 ರಿಂದ 84 ರವರೆಗೆ ಗಮಿನಿಸಿ

KT ಫ್ರಾನ್ಸಿಸ್ ಬಿನ್ KV ಥಾಮಸ್ ಎಂಬ ಒಂದೇ ಹೆಸರಿನಲ್ಲಿ ಖಾತೆ ಇರುತ್ತದೆ. ಅಲ್ಲದೆ ಕೆಲವು ಆಸ್ತಿ ಸಂಖ್ಯೆ51 ರಿಂದ 54ರವರೆಗೆ ಹಣ ಸಂದಾಯ ಕೂಡಾ ಆಗಿರುತ್ತದೆ. ಇಷ್ಟು ದೊಡ್ಡ ಆಸ್ತಿ ಆ ಹೆಸರಿನಲ್ಲಿಲ್ಲ ಹಾಗೂ ಈ ಲೋಪ ಇನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ. ಇದು ಕೇವಲ ಕಣ್ತಪ್ಪಿನ ಲೋಪವೋ ಅಥವಾ ತಂತ್ರಾಂಶ ದೋಷವೋ ಸ್ಪಷ್ಟವಾಗಿಲ್ಲ.

ಇತರೆ ಹಳ್ಳಿಗಳ ದಾಖಲೆಯಲ್ಲಿ ಈ ರೀತಿ ಯಾವುದೇ ದೋಷಗಳಿಲ್ಲ. ಕನ್ನಡ ಪದಗಳ ತಪ್ಪು ದಾಖಲೆಯನ್ನು ಕಷ್ಟಪಟ್ಟು ಸಹಿಸಿಕೊಂಡರೆ ಮಾಹಿತಿ ಪಡೆಯಲು ಈ ತಾಣ ಸೂಕ್ತವಾಗಿದೆ. ಆದರೆ. ಈ ಮೇಲ್ಕಂಡ ವಿವರಗಳ ಬಗ್ಗೆ ಸಂಬಂಧಪಟ್ಟವರು ಸೂಕ್ತವಾಗಿ ಪ್ರತಿಕ್ರಿಯಿಸಿ, ಲೋಪದೋಷಗಳನ್ನು ಸರಿಪಡಿಸಬೇಕು ಎಂದು ಕೇಳಿಕೊಳ್ಳುತ್ತೇವೆ.
 * ಚಂದ್ರಶೇಖರ್, ಆನೇಕಲ್