ಪಡಿತರ ಚೀಟಿದಾರರು ಹಾಗೂ ಅಡುಗೆ ಅನಿಲ(ಎಲ್ ಪಿಜಿ) ಗ್ರಾಹಕರು ತಮ್ಮ ಖಾತೆಗಳು ಕಾನೂನು
ಬದ್ಧವಾಗಿದೆಯೇ? ಅಕ್ರಮ ಸಂಪರ್ಕ ಏನಾದರೂ ಆಗಿದಿಯೇ? ಎಲ್ ಪಿಜಿ ಸಂಪರ್ಕ ರದ್ದು
ಪಡಿಸಲಾಗಿದೆಯೇ? ಎಂಬುದನ್ನು ಆನ್ ಲೈನ್ ಮೂಲಕ ತಿಳಿದುಕೊಳ್ಳಬಹುದು.
ಬೆಂಗಳೂರು
ನಗರದವೊಂದರಲ್ಲೇ 9.1 ಲಕ್ಷಕ್ಕೂ ಅಧಿಕ ಅನಧಿಕೃತ ಎಲ್ ಪಿ ಜಿ ಸಂಪರ್ಕ ಇರುವುದನ್ನು
ಸರ್ಕಾರ ಅಧಿಕೃತವಾಗಿ ಬಹಿರಂಗ ಪಡಿಸಿದ ಮೇಲೆ ಸಾರ್ವಜನಿಕರಲ್ಲಿ ತಮ್ಮ ಮನೆ ಎಲ್ ಪಿಜಿ
ಅಸಲಿಯೇ ನಕಲಿಯೇ ಎಂಬ ಪ್ರಶ್ನೆ ಕಾಡುತ್ತಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವೆಬ್ ಸೈಟ್ ಗೆ ಭೇಟಿ ನೀಡಿ ಸ್ಕ್ರೋಲ್ ಆಗುತ್ತಿರುವ ಕೊಂಡಿಯನ್ನು ಕ್ಲಿಕ್ ಮಾಡಿದರೆ ಎಲ್.ಪಿ.ಜಿ ಬಳಕೆದಾರರ ಜೋಡಣೆ ಸ್ಥಿತಿ ವೆಬ್ ಪುಟಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ.
ಆದರಲ್ಲಿ
ನಿಮ್ಮ ಎಲ್.ಪಿ.ಜಿ ಹಂಚಿಕೆದಾರರನ್ನು ಆಯ್ಕೆ ಮಾಡಿ(ಇಂಡೇನ್, ಹಿಂದೂಸ್ತಾನ್, ಭಾರತಿ)
ನಂತರ ಜಿಲ್ಲೆ, ಸ್ಥಳೀಯ ವಿತಕರರನ್ನು ಸೂಚಿಸಿ, ಬಳಕೆದಾರರ ಸಂಖ್ಯೆ ತಿಳಿಸಿದರೆ ನಿಮ್ಮ
ಎಲ್ ಪಿಜಿ ಜಾತಕ ತೆರೆದುಕೊಳ್ಳುತ್ತದೆ. ನಿಮ್ಮ ಸಂಪರ್ಕ ಕಾನೂನುಬದ್ಧವಾಗಿದೆ ಅಥವಾ ಇಲ್ಲ
ಎಂಬುದು ತಕ್ಷಣಕ್ಕೆ ತಿಳಿಯುತ್ತದೆ.
ವೆಬ್ ಸೈಟ್ ಜಾಮ್:
ಕಳೆದ ದಿನಗಳಲ್ಲಿ ಸುಮಾರು 41 ಲಕ್ಷಕ್ಕೂ ಅಧಿಕ ಗ್ರಾಹಕರು ಈ ವೆಬ್ ತಾಣಕ್ಕೆ ಭೇಟಿ
ನೀಡಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಸುಲಭವಾಗಿ ಮಾಹಿತಿ
ಪಡೆಯಬಹುದಾಗಿದೆ. ಪಡಿತರ ಚೀಟಿ ಹಾಗೂ ಎಲ್ ಪಿಜಿ ಬಳಕೆದಾರರ ಮಾಹಿತಿಯಲ್ಲಿ
ಬದಲಾವಣೆಗಳಿದ್ದರೆ ಅದನ್ನು ಅಧಿಕಾರಿಗಳ ಗಮನಕ್ಕೆ ತರಬಹುದು. 24 ಗಂಟೆಗಳಲ್ಲಿ
ತಿದ್ದುಪಡಿ ಮಾಡಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಬಿಎ ಹರೀಶ್ ಗೌಡ ತಿಳಿಸಿದ್ದಾರೆ.
ಇಂಟರ್ ನೆಟ್ ಇಲ್ಲದವರು ಏನ್ ಮಾಡ್ಬೇಕು?: ಸಂಬಂಧಿಸಿದ ತಾಲೂಕು ಕಚೇರಿಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ನಿರೀಕ್ಷಕರನ್ನು ಭೇಟಿಯಾಗಿ ಮಾಹಿತಿ ಮತ್ತು ಪರಿಹಾರ ಪಡೆಯಬಹುದು.
http://web1.kar.nic.in/fcslpg4/verify_lpg_status.aspx
No comments:
Post a Comment